NEET ಫಲಿತಾಂಶದಲ್ಲಿ ಎಸ್‌ಟಿ ವಿಭಾಗದಲ್ಲಿ 719ನೇ ರ‍್ಯಾಂಕ್ ಪಡೆದ ತುಮರಿಕೊಪ್ಪದ ವಿದ್ಯಾರ್ಥಿಗೆ ಸನ್ಮಾನ ..
ಹನಮಸಾಗರ ಸಮೀಪದ ತುಮರಿಕೊಪ್ಪ ಗ್ರಾಮದ ಶ್ರೀ ಮರಿಯಪ್ಪ ಗೋತಗಿ ಅವರ ಪುತ್ರರು NEET ಫಲಿತಾಂಶದಲ್ಲಿ ಎಸ್‌ಟಿ ವಿಭಾಗದಲ್ಲಿ 719ನೇ ಆಲ್ ಇಂಡಿಯಾ ರ‍್ಯಾಂಕ್ ಗಳಿಸಿ ಗ್ರಾಮಕ್ಕೆ ಹಾಗೂ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.ಈ ಹಿನ್ನೆಲೆಯಲ್ಲಿ ಇಂದು ವಾಲ್ಮೀಕಿ ಯುವ ಪಡೆಯ ತಾಲೂಕು ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆಯ ಸದಸ್ಯರಾದ ಯಮನೂರಪ್ಪ ಆರ್. ಅಬ್ಬಿಗೇರಿ ಅವರು ತಮ್ಮ ಆಪ್ತರೊಂದಿಗೆ ತುಮರಿಕೊಪ್ಪ ಗ್ರಾಮಕ್ಕೆ ತೆರಳಿ ವಿದ್ಯಾರ್ಥಿಯನ್ನು ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಂಕರಲಿಂಗ ಗಡಾದ, ದುರಗೇಶ ಗಾಣದಾಳ, ಮಹಾಂತೇಶ ಪೂಜಾರ (ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ತುಮರಿಕೊಪ್ಪ) ಹಾಗೂ ಶ್ರೀ ಮರಿಯಪ್ಪ ಗೋತಗಿ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

