15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

VALMIKI COMMUNITY: ಎಸ್‌ಟಿ ಪಟ್ಟಿಗೆ ಕುರುಬ ಸಮುದಾಯ ಸೇರಿಸಲು ವಾಲ್ಮೀಕಿ ಸಮಾಜ ವಿರೋಧ

ಬಳ್ಳಾರಿ: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರಿಸಲು ಹೊರಟಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿರುದ್ಧ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕ ಒಕ್ಕೂಟ ಗರಂ ಆಗಿದೆ.

ವಿರೋಧ ವ್ಯಕ್ತಪಡಿಸಿದ ಒಕ್ಕೂಟ

ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ಇಂದು ಈ ವಿಚಾರವಾಗಿ ಸಭೆಯನ್ನ ಮಾಡಿದ್ದು, ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಹೊರಟಿರುವುದನ್ನ ವಿರೋಧ ಮಾಡಿದ್ದು, ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ಸಿಎಂ‌ ಸಿದ್ದರಾಮಯ್ಯ ಅವರು ಈ ರೀತಿ ಮಾಡುವ ಮೂಲಕ ರಾಜ್ಯದಲ್ಲಿನ ಎಸ್‌ಟಿ ನಾಯಕರನ್ನ ತುಳಿಯುವ ಕೆಲಸ ಮಾಡಲು ಹೊರಟಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರು ರಾಜಣ್ಣ ಹಾಗೂ ನಾಗೇಂದ್ರ ಅವರನ್ನು ಸಿದ್ದರಾಮಯ್ಯ ಬಲಿಪಶು ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಮ್ಮ ನಾಯಕರು ಸಿಎಂಗೆ ಹೆದರಿ ಮಾತನಾಡುತ್ತಿಲ್ಲ
ಅಲ್ಲದೇ, ನಮ್ಮ ಎಸ್‌ಟಿ ಸಮುದಾಯದ ಅನೇಕ ಶಾಸಕರು ಹಾಗೂ ಸಚಿವರು ಸಿದ್ದರಾಮಯ್ಯ ಅವರಿಗೆ ಹೆದರಿಕೊಂಡು ಅವರ ವಿರುದ್ಧ ಮಾತನಾಡುತ್ತಿಲ್ಲ. ಅವರು ನಾಗೇಂದ್ರ ಅವರಿಗೆ ಸಚಿವ ಸ್ಥಾನ ಮತ್ತೆ ಕೊಡುತ್ತೇನೆ ಎಂದು ಹೇಳಿದ್ದು, ಅದರ ಜೊತೆಗೆ ಸತೀಶ್ ಜಾರಕಿಹೊಳಿ ಅವರಿಗೆ ಡಿಕೆ ಶಿವಕುಮಾರ್‌ ಅವರ ಬದಲಾಗಿ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಸುಳ್ಳು ಭರವಸೆ ಸಹ ಕೊಟ್ಟಿದ್ದಾರೆ ಎನ್ನುವ ಶಾಕಿಂಗ್‌ ಆರೋಪ ಮಾಡಿದ್ದಾರೆ.

ನಮಗೆ ಬುಡಕಟ್ಟು ಸಮಾಜದವರು ಎಸ್‌ಟಿ ಪಟ್ಟಿಗೆ ಸೇರಲು ಯಾವುದೇ ಆಕ್ಷೇಪ ಇಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಅವರು ನಮ್ಮ ವಾಲ್ಮೀಕಿ ಸಮಾಜವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ವಾಲ್ಮೀಕಿ ಸಮಾಜ ಸಂಪೂರ್ಣ ನಶಿಸಿ ಹೋಗಬೇಕು ಹಾಗೂ ವಾಲ್ಮೀಕಿ ಸಮಾಜದವರನ್ನ ಜೀವಂತವಾಗಿ ತುಳಿಯಬೇಕು ಎನ್ನುವ ಉದೇಶದಿಂದ ಕುರುಬ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದ್ದಾರೆ.

ಇನ್ನು ಸಿಎಂ ಅವರ ಬಳಿ ಒಕ್ಕೂಟ ವಿಭಿನ್ನವಾದ ಮನವಿ ಮಾಡಿದ್ದು, ಶೇ.50 ಮೀಸಲಾತಿಯನ್ನ ನಮಗೆ ಕಡಿ, ನಂತರ ಎಲ್ಲಾ ಸಮಾಜವನ್ನ ಈ ಪಟ್ಟಿಗೆ ಸೇರಿಸಿಬಿಡಿ. ನಂತರ ಒಳ ಮೀಸಲಾತಿ ವಾಲ್ಮಿಕಿ ಸಮಾಜಕ್ಕೆ ಕೊಡಿ, ಆಗ ನಾವು ವಿರೋಧ ಮಾಡಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಸಮಾಜದಲ್ಲಿ ಕುರುಬ ಸಮಾಜದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದಕ್ಕೆ ಬಂದಿದ್ದಾರೆ. ಆದರೆ ನಮ್ಮ ಸಮಾಜ ಕೆಲ ವರ್ಷಗಳಿಂದ ಮಾತ್ರ ಮುಂದಕ್ಕೆ ಬರುತ್ತಿದೆ ಅಷ್ಟೇ, ಇದನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಸಹಿಸಲು ಆಗದೇ ನಮ್ಮ ಸಮಾಜವನ್ನ ತುಳಿಯಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ವಾಲ್ಮೀಕಿ ಸಮುದಾಯದ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು ಸೇರಿ ಎಲ್ಲರೂ ಸರ್ಕಾರದ ಈ ನಿರ್ಧಾರದ ವಿರುದ್ಧ ಮಾತನಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles