17.8 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

Yadgir News ನಮಗೆ ಬೇಕಾಗಿರುವುದು ಇಂಥ ವರದಿಗಾರರು ||ಸರ್ಕಾರಿ ಹಣಕ್ಕೆ ‘ಹಿಟಾಚಿ’ ಕನ್ನ: ಯಡಿಯಾಪುರದಲ್ಲಿ ಕಾಂಕ್ರೀಟ್ ಕಾಲುವೆ ನಾಶಪಡಿಸುತ್ತಿರುವ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ದರ್ಪ!

Yadgir News ನಮಗೆ ಬೇಕಾಗಿರುವುದು ಇಂಥ ವರದಿಗಾರರು ||
ಸರ್ಕಾರಿ ಹಣಕ್ಕೆ ‘ಹಿಟಾಚಿ’ ಕನ್ನ: ಯಡಿಯಾಪುರದಲ್ಲಿ ಕಾಂಕ್ರೀಟ್ ಕಾಲುವೆ ನಾಶಪಡಿಸುತ್ತಿರುವ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ದರ್ಪ!
​ಯಡಿಯಾಪುರ (ಹುಣಸಗಿ): ರೈತರ ಹೊಲಕ್ಕೆ ನೀರು ತಲುಪಲಿ ಎಂದು ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಕಾಲುವೆಗಳನ್ನು ಈಗ ಅಧಿಕಾರಿಗಳೇ ಜೆಸಿಬಿ ಹಚ್ಚಿ ಕಿತ್ತೆಸೆಯುತ್ತಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ವರದಿಯಾಗಿದೆ.
​ಏನಿದು ಘಟನೆ?:
ಕಳೆದ ಎರಡು ಮೂರು ವರ್ಷಗಳ ಹಿಂದೆ ಕೃಷ್ಣ ಭಾಗ್ಯ ಜಲ ನಿಗಮದ (KBJNL) ವತಿಯಿಂದ ಲೆಟರ್ ನಂಬರ್ 12ರ ಕಾಲುವೆಗೆ ಕಾಂಕ್ರೀಟ್ ಹಾಕಿ ಆಧುನೀಕರಣಗೊಳಿಸಲಾಗಿತ್ತು. ಆದರೆ, ಈಗ ಹೂಳೆತ್ತುವ ನೆಪದಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ಹಿಟಾಚಿ ಹಾಗೂ ಜೆಸಿಬಿ ಬಳಸಿ ಸುಸ್ಥಿತಿಯಲ್ಲಿದ್ದ ಕಾಂಕ್ರೀಟ್ ಅನ್ನೂ ಕಿತ್ತೆಸೆಯುತ್ತಿದ್ದಾರೆ. ಇದು ಸಾರ್ವಜನಿಕ ಹಣದ ನೇರ ಲೂಟಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
​ಅಧಿಕಾರಿಗಳ ಅಹಂಕಾರದ ಪರಮಾವಧಿ:
ಈ ಕುರಿತು ಸ್ಥಳಕ್ಕೆ ಭೇಟಿ ನೀಡಿದ ಮಾಧ್ಯಮದವರು ಪ್ರಶ್ನಿಸಿದರೆ, ಅಧಿಕಾರಿಗಳು ಕನಿಷ್ಠ ಮರ್ಯಾದೆಯೂ ಇಲ್ಲದೆ ಮಾತನಾಡಿದ್ದಾರೆ. “ನೀನು ಮೀಡಿಯಾದವನಾದರೂ ಆಗಿರು, ಪೇಪರ್‌ನವನಾದರೂ ಆಗಿರು, ನಿನಗೆ ಏನು ಮಾಡಿಕೊಳ್ಳಲು ಸಾಧ್ಯವೋ ಮಾಡಿಕೊ, ನಾವು ಹಿಟಾಚಿ ಹಚ್ಚಿಯೇ ಕೆಲಸ ಮಾಡುತ್ತೇವೆ” ಎಂದು ಧಾರ್ಷ್ಟ್ಯ ಪ್ರದರ್ಶಿಸಿದ್ದಾರೆ.
​ಸಚಿವರಿಗೆ ನೇರ ಸವಾಲು:
ಮಾಧ್ಯಮದವರಿಗೆ ಅವಹೇಲನ ಮಾಡಿದ ಮತ್ತು ಸರ್ಕಾರಿ ಆಸ್ತಿ ನಾಶಪಡಿಸುತ್ತಿರುವ ಈ ಅಧಿಕಾರಿಗಳ ವಿರುದ್ಧ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ತಕ್ಷಣ ಕ್ರಮ ಕೈಗೊಂಡು, ಇಂತಹ ಭ್ರಷ್ಟ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles