14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಎಂ5 ಇಸಿಟಿ ಮಾಲ್‌ ನಲ್ಲಿ 2,000ಕ್ಕೂ ಹೆಚ್ಚು ಹಿತ್ತಾಳೆ ಗಂಟೆಗಳಿಂದ ಸಿದ್ಧಗೊಂಡ ದಿವ್ಯವಾದಇಸಿಟಿ ನಾದಗಣೇಶ ಅನಾವರಣ

ಬೆಂಗಳೂರು, ಸೆಪ್ಟೆಂಬರ್ 09. 2026: ಎಂ5 ಮಹೇಂದ್ರ ಗ್ರೂಪ್ ನಿರ್ಮಿಸಿರುವ ಎಲೆಕ್ಟ್ರಾನಿಕ್ ಸಿಟಿಯ ಮೊದಲ ಸಂಯೋಜಿತ ಮಾಲ್ ಆದ ಎಂ5 ಇಸಿಟಿ ಮಾಲ್ ಗಣೇಶ ಚತುರ್ಥಿಯ ಸಂಭ್ರಮದ ಪ್ರಯುಕ್ತ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹಿತ್ತಾಳೆ ಗಂಟೆಗಳಿಂದ ರಚಿಸಲಾದ ಅಪರೂಪದ ಗಣೇಶನ ಮೂರ್ತಿಯನ್ನು ಅನಾವರಣಗೊಳಿಸಿದೆ.
“2,000ಕ್ಕೂ ಹೆಚ್ಚು ಮಂಗಳಕರ ಹಿತ್ತಾಳೆ ಗಂಟೆಗಳಿಂದ ರೂಪಿಸಲಾದ ಭವ್ಯ ಗಣೇಶನ ಮೂರ್ತಿ” ಎಂಬ ಹೆಗ್ಗಳಿಕೆಯೊಂದಿಗೆ ಈ ಗಣಪತಿ ಕಲಾಕೃತಿಯು ಕೇವಲ ಗಾತ್ರದಿಂದಷ್ಟೇ ಅದ್ದೂರಿಯಾಗಿಲ್ಲ, ಬದಲಿಗೆ 2.5 ರಿಂದ 5 ಇಂಚುಗಳವರೆಗಿನ ಸಾವಿರಾರು ಗಂಟೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ ನಿರ್ಮಿಸಿರುವ ವಿಶಿಷ್ಟ ರೂಪದಿಂದ ಗಮನ ಸೆಳೆಯುತ್ತದೆ. ಸೆಪ್ಟೆಂಬರ್ 8 ರಿಂದ 15 ರವರೆಗೆ ಮಾಲ್‌ ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವ ಈ ಗಣೇಶ ಮೂರ್ತಿಯು ಈ ಹಬ್ಬದ ದಿನಗಳಲ್ಲಿ ಅತ್ಯಂತ ಪ್ರಮುಖ ಆಕರ್ಷಣೀಯ ತಾಣವಾಗಿ ಕಣ್ಮನ ಸೆಳೆಯಲಿದೆ.
ಪ್ರತಿ ಗಂಟೆಯಲ್ಲೂ ಅಡಗಿದೆ ದೈವಿಕ ಆಶೀರ್ವಾದ
ಭಾರತೀಯ ಆಧ್ಯಾತ್ಮಿಕ ಸಂಪ್ರದಾಯದಲ್ಲಿ, ದೇವಾಲಯದ ಗಂಟೆಯ ನಾದಕ್ಕೆ ವಿಶೇಷ ಮಹತ್ವವಿದೆ. ಇದು ಸಾಂಪ್ರದಾಯಿಕವಾಗಿ ಮಂಗಳಕರತೆ, ಸಕಾರಾತ್ಮಕ ಶಕ್ತಿಯ ಆಹ್ವಾನ ಹಾಗೂ ಪೂಜೆ-ಪ್ರಾರ್ಥನೆಗಳ ಸಂದರ್ಭದಲ್ಲಿ ಏಕಾಗ್ರತೆ ಮೂಡಿಸುವ ಸಂಕೇತವಾಗಿದೆ. ಈ ನಂಬಿಕೆಯನ್ನು ಪ್ರೇರಣೆಯಾಗಿಟ್ಟುಕೊಂಡು, ಎಂ5 ಇಸಿಟಿ ಮಾಲ್ ದೇವಾಲಯದ ಗಂಟೆಯನ್ನೇ ತನ್ನ ಗಣೇಶನ ಮೂರ್ತಿಯ ಮುಖ್ಯ ಭಾಗವನ್ನಾಗಿ ಪರಿವರ್ತಿಸಿದೆ. 2,000ಕ್ಕೂ ಅಧಿಕ ಹಿತ್ತಾಳೆ ಗಂಟೆಗಳು ಒಟ್ಟಾಗಿ ಸೇರಿರುವ ಈ ಕಲಾಕೃತಿಯು, ಗಂಟೆಯ ಪ್ರತಿಯೊಂದು ನಾದವೂ ಹೊಸ ಮಂಗಳಕರ ಆರಂಭ, ಸಕಾರಾತ್ಮಕತೆಯನ್ನು ಸ್ವಾಗತಿಸುವ ಮತ್ತು ಪ್ರಾರ್ಥನೆಯ ಕ್ಷಣ ಎಂಬ ನಂಬಿಕೆಯನ್ನು ಸಾರುತ್ತದೆ. ಇದು ಕೇವಲ ಕಲಾತ್ಮಕ ಪ್ರದರ್ಶನ ಮಾತ್ರವಲ್ಲದೆ, ನಾದ, ಕರಕುಶಲತೆ ಮತ್ತು ಸಂಪ್ರದಾಯದ ಮೂಲಕ ಭಕ್ತಿಗೆ ರೂಪ ನೀಡಿದ ಸಂಭ್ರಮವಾಗಿದೆ.
ಗಣಪತಿ ಆಶೀರ್ವಾದ ಪ್ರತಿ ಮನೆಗೂ
ಈ ಗಂಟೆಗಳ ಕಥೆ ಹಬ್ಬದೊಂದಿಗೆ ಮುಗಿಯುವುದಿಲ್ಲ. ಗಣೇಶ ಚತುರ್ಥಿಯ ನಂತರ, ಈ ಕಲಾಕೃತಿಯಲ್ಲಿ ಬಳಸಲಾದ 2,000ಕ್ಕೂ ಹೆಚ್ಚು ಹಿತ್ತಾಳೆ ಗಂಟೆಗಳನ್ನು ಆಶೀರ್ವಾದದ ನೆನಪಿನ ಕಾಣಿಕೆಯಾಗಿ ಗ್ರಾಹಕರಿಗೆ ವಿತರಿಸಲಾಗುತ್ತದೆ. ಈ ಮೂಲಕ ಸಾರ್ವಜನಿಕ ಪ್ರದರ್ಶನದಲ್ಲಿದ್ದ ಪ್ರತಿಯೊಂದು ಗಂಟೆಯೂ ಭಕ್ತಿಯ ವೈಯಕ್ತಿಕ ಸಂಕೇತವಾಗಿ ಬದಲಾಗುತ್ತದೆ. ಇದರಿಂದಾಗಿ ಸಂದರ್ಶಕರು ಕೇವಲ ನೆನಪಿನ ಕಾಣಿಕೆಯನ್ನಷ್ಟೇ ಅಲ್ಲದೆ, ಗಣಪತಿಯ ಆಶೀರ್ವಾದ, ಮಂಗಳಕರತೆಯ ಸಂಕೇತ ಹಾಗೂ ಎಂ5 ಇಸಿಟಿ ಮಾಲ್‌ನ ಹಬ್ಬದ ಸಂಭ್ರಮದ ನೆನಪನ್ನು ತಮ್ಮ ಮನೆಗಳಿಗೆ ಕೊಂಡೊಯ್ಯಲಿದ್ದಾರೆ.
ಈ ವಿನೂತನ ಯೋಜನೆ ಕುರಿತು ಮಾತನಾಡಿದ ಎಂ5 ಮಹೇಂದ್ರ ಗ್ರೂಪ್‌ನ ಎಂ5 ಇಸಿಟಿ ಮಾಲ್‌ ನ ಸೆಂಟರ್ ಡೈರೆಕ್ಟರ್ ರಾಜೇಶ್ ನಾಯ್ಡು ಅವರು, “ಗಣೇಶ ಚತುರ್ಥಿ ಎಂದರೆ ಭಕ್ತಿ, ಕಲೆ ಮತ್ತು ಸಮಾಜ ಒಟ್ಟಾಗಿ ಸೇರುವ ಸಂಭ್ರಮವಾಗಿದೆ. ನಮ್ಮ ಸಂಪ್ರದಾಯದಲ್ಲಿ ಹಿತ್ತಾಳೆ ಗಂಟೆಗೆ ಸದಾ ವಿಶೇಷ ಸ್ಥಾನವಿದೆ, ಅದರ ನಾದವು ಮಂಗಳಕರತೆ, ಭಕ್ತಿ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಸೂಚಿಸುತ್ತದೆ. 2,000ಕ್ಕೂ ಹೆಚ್ಚು ಗಂಟೆಗಳಿಂದ ಗಣೇಶನನ್ನು ರಚಿಸುವ ಮೂಲಕ ನಾವು ಆ ಸಾಂಕೇತಿಕತೆಯನ್ನು ಸಾಕಾರಗೊಳಿಸಿದ್ದೇವೆ. ಹಬ್ಬದ ನಂತರ ಈ ಗಂಟೆಗಳನ್ನು ನಮ್ಮ ಗ್ರಾಹಕರಿಗೆ ಹಂಚುವ ಮೂಲಕ, ಮಾಲ್‌ನ ಸಂಭ್ರಮ ಮುಗಿದ ನಂತರವೂ ಬಪ್ಪನ ಆಶೀರ್ವಾದ ಅವರ ಮನೆಗಳಲ್ಲಿ ನಿರಂತರವಾಗಿ ಪ್ರತಿಧ್ವನಿಸಲಿ ಎಂಬುದು ನಮ್ಮ ಆಶಯ” ಎಂದು ಹೇಳಿದರು.
ಈ ಕಲಾಕೃತಿಯು ಹಬ್ಬದ ದಿನಗಳಲ್ಲಿ ಎಲ್ಲಾ ವಯೋಮಾನದ ಸಂದರ್ಶಕರಿಗೂ ಮುಕ್ತವಾಗಿದ್ದು, ಎಲೆಕ್ಟ್ರಾನಿಕ್ ಸಿಟಿಯ ಹೃದಯಭಾಗದಲ್ಲಿ ಫೋಟೋಗ್ರಫಿ, ಪ್ರಾರ್ಥನೆ ಮತ್ತು ಹಬ್ಬದ ಆಚರಣೆಗೆ ಉತ್ತಮ ಅವಕಾಶ ಕಲ್ಪಿಸಿದೆ.
ಎಂ5 ಇಸಿಟಿ ಮಾಲ್ ಕುರಿತು
ಸಿಲ್ಕ್ ಬೋರ್ಡ್–ಹೊಸೂರು ಕಾರಿಡಾರ್‌ನಲ್ಲಿರುವ ಬೆಂಗಳೂರಿನ ಮೊದಲ ಸಂಯೋಜಿತ ಮಾಲ್ ಎಂ5 ಇಸಿಟಿ ಮಾಲ್ ಆಗಿದ್ದು, ಇದನ್ನು ಎಂ5 ಮಹೇಂದ್ರ ಗ್ರೂಪ್ ಅಭಿವೃದ್ಧಿಪಡಿಸಿದೆ. ಎಲೆಕ್ಟ್ರಾನಿಕ್ ಸಿಟಿಯ ಹೃದಯಭಾಗದಲ್ಲಿ 6.8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ಮಾಲ್, 300ಕ್ಕೂ ಹೆಚ್ಚು ಜಾಗತಿಕ ಮತ್ತು ಭಾರತೀಯ ಬ್ರ್ಯಾಂಡ್‌ಗಳು, 150ಕ್ಕೂ ಹೆಚ್ಚು ರಿಟೇಲ್ ಮಳಿಗೆಗಳು ಮತ್ತು ಡೈನ್-ಇನ್ ಸೌಲಭ್ಯವಿರುವ 8-ಸ್ಕ್ರೀನ್ ಮಲ್ಟಿಪ್ಲೆಕ್ಸ್ ಅನ್ನು ಒಳಗೊಂಡಿದ್ದು, ದಕ್ಷಿಣ ಬೆಂಗಳೂರಿನ ಪ್ರಮುಖ ಲೈಫ್‌ಸ್ಟೈಲ್ ಮತ್ತು ಮನರಂಜನಾ ತಾಣವಾಗಿದೆ.
ಮಾಧ್ಯಮ ಮಾಹಿತಿ ಸಂಪರ್ಕ:
ವಿನೀತ್ ಸಿಂಗ್ ಸೇಠಿ | 7829881884 | vaneet.singh@mahendrahomes.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles