ಗಂಗಾವತಿ, ಸೆ.28:
ಗಂಗಾವತಿಯಲ್ಲಿ “ಬಲಿಷ್ಠ ವ್ಯಕ್ತಿತ್ವ : ಬಲಿಷ್ಠ ರಾಷ್ಟ್ರ” ಎಂಬ ಮಹತ್ವದ ಚಿಂತನಾ ಕಾರ್ಯಕ್ರಮ ನಡೆಯಲು ಸಜ್ಜಾಗಿದೆ. ಲೀವ್ ವಿತ್ ಹ್ಯೂಮಾನಿಟಿ ಹಾಗೂ ಕಿಷ್ಕಿಂಧ ಯುವ ಚಾರಣ ಬಳಗದ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಭಾನುವಾರ ಸಂಜೆ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ DIG ಆಗಿರುವ, ಜೊತೆಗೆ ಪ್ರಸಿದ್ಧ ಚಿಂತಕ ಹಾಗೂ ಪ್ರೇರಣಾದಾಯಕ ಭಾಷಣಕಾರರಾದ ಶ್ರೀ ರವಿ ಡಿ. ಚನ್ನಣ್ಣವರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅವರು ತಮ್ಮ ಚಿಂತನಮಂಥನದ ಮೂಲಕ ಯುವಕರಲ್ಲಿ ದೇಶಪ್ರೇಮ, ವ್ಯಕ್ತಿತ್ವ ವಿಕಸನ ಹಾಗೂ ರಾಷ್ಟ್ರನಿರ್ಮಾಣದ ಹೊಣೆಗಾರಿಕೆಯ ಬಗ್ಗೆ ಸ್ಪೂರ್ತಿದಾಯಕ ಸಂದೇಶ ಹಂಚಿಕೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ಅಧ್ಯಕ್ಷತೆಯನ್ನು ಗಂಗಾವತಿಯ ಖ್ಯಾತ ಹೃದಯರೋಗ ತಜ್ಞರಾದ ಡಾ. ಜಿ. ಚಂದ್ರಪ್ಪ ವಹಿಸಲಿದ್ದಾರೆ.
ಈ ವಿಶೇಷ ಉಪನ್ಯಾಸ ಕಾರ್ಯಕ್ರಮವು 28 ಸೆಪ್ಟೆಂಬರ್ 2025, ರವಿವಾರ, ಸಂಜೆ 4 ಗಂಟೆಗೆ ಗಂಗಾವತಿಯ ಅಮರ್ ಹಾಸ್ಪಿಟಲ್ ಆವರಣದಲ್ಲಿ ನಡೆಯಲಿದೆ.
ಯುವಜನತೆಗೆ ದಾರಿ ತೋರುವಂತ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೇರಣಾದಾಯಕ ವಿಚಾರಸರಣಿಯಲ್ಲಿ ತೊಡಗಿಸಿಕೊಳ್ಳುವಂತೆ ಸಂಘಟಕರು ಅರ್ಜುನ್ ಆಹ್ವಾನಿಸಿದ್ದಾರೆ.
ವರದಿ- ಆಂಜನೇಯ. ಮಟ್ಟೂರ

