14.7 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ದೇವಿ ಪುರ‍ಾಣ ಪ್ರವಚನ ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ

ದೇವಿ ಪುರ‍ಾಣ ಪ್ರವಚನ ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ -ಷ॥ಬ್ರ॥ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿ-ವಿಜಯನಗರ ಜಿಲ್ಲೆ ಕೂಡ್ಲಿಗಿ : ದೇವಿ ಪುರಾಣ ಪ್ರವಚನವು , ಸರ್ವರ ಬಾಳ ಜ್ಞಾನ ಜ್ಯೋತಿಯಾಗಿದೆ ಎಂದು ಷ॥ಬ್ರ॥ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮಿಗಳು ನುಡಿದರು. ಅವರು ದಸರ‍ಾ ನವರಾತ್ರಿ ನಿಮಿತ್ತ , ಕೂಡ್ಲಿಗಿ ಹಿರೇಮಠದ ಆವರಣದಲ್ಲಿ ಆಯೋಜಿಸಲಾಗಿದ್ದ. 14ನೇ ವರ್ಷದ ದಸರಾ ಮಹೋತ್ಸವ ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ , ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನವರಾತ್ರೋತ್ಸವ ಸಂದರ್ಭದಲ್ಲಿನ ಸರ್ವರೂ ನಿತ್ಯ , ಶ್ರೀದೇವಿ ಪುರಾಣ ಪ್ರವಚನವನ್ನು ಶ್ರದ್ಧಾ ಭಕ್ತಿಯಿಂದ ಆಲಿಸಬೇಕು. ಬಾಳಿನ ಅಂಧಃಕಾರ ತೊಲಗಿ ಜ್ಞಾನ ಜ್ಯೋತಿ ಬೆಳಗಲಿದೆ , ಶ್ರೀದೇವಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಿದೆ ಎಂದರು. ಜ್ಯೋತಿ ಜ್ಞಾನದ ಸಂಕೇತ ಸುಜ್ಞಾನದ ಸಾರ , ಶ್ರೀದೇವಿ ಪುರಾಣ ಆಲಿಸುವುದರಿಂದ ದೊರಕಲು ಸಾಧ್ಯ ಎಂದರು. ಎಂ ಎ ವೇದ ಮೂರ್ತಿ ರವೀಂದ್ರ ಶಾಸ್ತ್ರಿಗಳು ಪುರಾಣ ಪ್ರವಚನ ಮಾಡಿದರು. ಹಾಗೂ ಸಂಗೀತ ಶಿಕ್ಷಕರಾದ ಶ್ರೀಮತಿ ರೋಜಾರಾಣಿಯವರು , ಮತ್ತು ಸಂಗೀತ ಕಲಾವಿದರಾದ ಹಾರಕಬಾವಿ ಎಂ.ತಿಪ್ಪೇಸ್ವಾಮಿ ರವರಿಂದ ಸಂಗೀತ ಸೇವೆ. ಹಿರೇಗ್ಡಾಳು ಬಣಕಾರ ಕೊಟ್ರೇಶ ರವರು , ಹಾಗೂ ಅಗ್ರಹಾರ ಎನ್ ಎಂ ನಾಗರ‍ಾಜಯ್ಯರವರು ತಬಲ ಹಾರ್ಮೋನಿಯಂ ಸೇವೆ ನೀಡಿದರು. ಹಿರಿಯ ನಾಗರೀಕರು , ಮಹಿಳೆಯರು , ಮಕ್ಕಳಾದಿಯಾಗಿ ಯುವಕರು ವೃದ್ಧರು. ಕೂಡ್ಲಿಗಿ ಹಿರೇಮಠದ ಸಿಬ್ಬಂದಿಯವರು , ಹಾಗೂ ನೂರಾರು ಭಕ್ತರು ಪುರಾಣ ಪ್ರವಚನದಲ್ಲಿ ಭಾಗಿಯಾಗಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles