ಪ್ರೋಟೋಕಾಲ್ ಮರೆತು ಮಗುವನ್ನು ಎತ್ತಿ ಓಡಿದ ಕಮಿಷನರ್!,ಗಾಯಗೊಂಡಿದ್ದ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಆಸ್ಪತ್ರೆಯ ಕಡೆಧಾವಿಸಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದರು..

ಧಾರವಾಡ: ಧಾರವಾಡದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಇತ್ತೀಚೆಗೆ ನಡೆದ ಆ ಘೋರ ಘಟನೆ ಇಡೀ ಮಾನವಕುಲವೇ ಕಣ್ಣೀರು ಇಡುವಂತೆ ಮಾಡಿದೆ. ವೃತಿಯಲ್ಲಿ ಡಾಕ್ಟರ್ ಆದ ತಾಯಿಯೇ ಗಂಡನನ್ನು ಕೊ*ಲೆ ಮಾಡಿ, 8 ವರ್ಷದ ಮಗನ ಮೇಲೆ ಮಾರಣಂತೀಕ ಹ*ಲ್ಲೆ ಮಾಡಿದ್ದಳು. ಇಂತಹ ಭೀಕರ ರ*ಕ್ತದ ಮಡುವಿನಲ್ಲಿ, ಘಟನೆಯ ತೀವ್ರತೆಗೆ ಸಿಲುಕಿ ತೀ*ವ್ರವಾಗಿ ಗಾ*ಯಗೊಂಡಿದ್ದ ಪುಟ್ಟ ಕಂದಮ್ಮ ನಿಹಿತ್ ಇನ್ನೂ ಉಸಿರಾಡುತ್ತಿದ್ದ. ಆ ಎಳೆ ಎದೆಯ ಕೊನೆಯ ಒದ್ದಾ*ಟವನ್ನು ನೋಡಿದ ಕ್ಷಣ, ಅಲ್ಲಿಗೆ ಭೇಟಿ ನೀಡಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರೊಳಗಿದ್ದ ಸೌಮ್ಯ ತಂದೆಯೊಬ್ಬ ಜಾಗೃತನಾಗಿದ್ದ!
ಪ್ರೋಟೋಕಾಲ್ ಮರೆತು ಮಗುವನ್ನು ಎತ್ತಿ ಓಡಿದ ಕಮಿಷನರ್!
ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಮಗು ಕೊನೆಯುಸಿರೆ*ಳೆಯುತ್ತಿರುವ ಸ್ಥಿತಿಯಲ್ಲಿತ್ತು. ಅಲ್ಲಿ ಕಮಿಷನರ್ ಶಶಿಕುಮಾರ್ ಅವರಿಗೆ ತಾನು ದೊಡ್ಡ ಐಪಿಎಸ್ ಆಫೀಸರ್ ಎಂಬ ಹಮ್ಮು-ಬಿಮ್ಮು ನೆನಪಿರಲಿಲ್ಲ. ಆಂಬ್ಯುಲೆನ್ಸ್ ಬರಲು ತಡವಾದರೆ ಈ ಪುಟ್ಟ ಜೀವ ಹಾರಿಹೋಗುತ್ತದೆ ಎಂದು ತಕ್ಷಣವೇ ಅರಿತ ಅವರು, ಯಾವುದೇ ಪ್ರೋಟೋಕಾಲ್ ನೋಡದೆ, ತಮ್ಮ ಕೈಗಳಿಂದ ಆ ರಕ್ತಸಿಕ್ತ ಮಗುವನ್ನು ಎದೆಗಪ್ಪಿಕೊಂಡರು. ತನ್ನ ಸ್ವಂತ ಮಗು ತೊಂದರೆಯಲ್ಲಿದ್ದಾಗ ಒಬ್ಬ ತಂದೆ ಹೇಗೆ ಎದೆ ಒಡೆದು ಓಡುತ್ತಾನೋ, ಹಾಗೆ ಕಮಿಷನರ್ ಶಶಿಕುಮಾರ್ ಅವರು ನಿಹಿತ್‌ನನ್ನು ಎತ್ತಿಕೊಂಡು ವಿಳಂಬ ಮಾಡದೆ ಆಸ್ಪತ್ರೆಯ ಕಡೆಗೆ ಧಾವಿಸಿ ಸಕಾಲದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
”ಆಸ್ಪತ್ರೆಗೆ ತಲುಪುವವರೆಗೂ ಮಗುವಿಗೆ ಧೈರ್ಯ ತುಂಬುತ್ತಾ, ಶೀಘ್ರವಾಗಿ ವೈದ್ಯಕೀಯ ನೆರವು ಸಿಗುವಂತೆ ಮಾಡಿದ ಕಮಿಷನರ್ ಅವರ ಸಮಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.”
ಬದುಕಿ ಬರಲಿ ಪುಟ್ಟ ಜೀವ: ಪ್ರಾರ್ಥಿಸೋಣ…
ಸದ್ಯ ಆ ಪುಟ್ಟ ಕಂದ ನಿಹಿತ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಬದುಕಿ ಬರಲು ಹೋರಾಡುತ್ತಿದ್ದಾನೆ. ಮಗುವನ್ನು ಎತ್ತಿ ಓಡಿದ ಆ ಕಮಿಷನರ್ ಅವರ ಕೈಗಳಲ್ಲಿದ್ದ ಕರುಣೆ ಮತ್ತು ಸಮಯಪ್ರಜ್ಞೆ ಸುಳ್ಳಾಗದಿರಲಿ. ಆ ಪುಟ್ಟ ಜೀವ ಎದ್ದು ಬಂದು ಮತ್ತೆ ನಗುವಂತಾಗಲಿ, ನಿಹಿತ್ ಶೀಘ್ರದಲ್ಲೇ ಆರೋಗ್ಯವಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ನಾವೆಲ್ಲರೂ ಆ ದೇವರಲ್ಲಿ ಪ್ರಾರ್ಥಿಸೋಣ.
ಖಾಕಿ ಬಟ್ಟೆಯೊಳಗೂ ಒಂದು ಮಿಡಿಯುವ ಕರುಣಾಮಯಿ ಹೃದಯವಿದೆ ಎಂಬುದನ್ನು ಸಾಬೀತುಪಡಿಸಿದ ಐಪಿಎಸ್ ಅಧಿಕಾರಿ ಎನ್. ಶಶಿಕುಮಾರ್ ಅವರಿಗೆ ಕೋಟಿ ನಮನಗಳು.ಅವರ ಪ್ರಯತ್ನ ಶ್ಲಾಘನೀಯ..
ಸಂಪಾದಕರು: ರಾಮಚಂದ್ರಪ್ಪ ಪೂಜೇರ

