18.5 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಜ.15ರಂದು ಸಾರ್ವಜನಿಕವಾಗಿ ಜನ್ಮದಿನ ಆಚರಿಸುವುದಿಲ್ಲ:ಈಶ್ವರ ಖಂಡ್ರೆ

ಜ.15ರಂದು ಸಾರ್ವಜನಿಕವಾಗಿ ಜನ್ಮದಿನ ಆಚರಿಸುವುದಿಲ್ಲ:ಈಶ್ವರ ಖಂಡ್ರೆ
ಬ್ಯಾನರ್, ಕಟೌಟ್, ಜಾಹೀರಾತು ನೀಡದಂತೆ ಈಶ್ವರ ಖಂಡ್ರೆ ಮನವಿ

ಬೆಂಗಳೂರು, ಜ.9: ಜನವರಿ 15ರಂದು ತಮ್ಮ ಜನ್ಮ ದಿನವನ್ನು ಸಾರ್ವಜನಿಕವಾಗಿ ಆಚರಣೆ ಮಾಡದಿರಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತೀರ್ಮಾನಿಸಿದ್ದು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬ್ಯಾನರ್, ಕಟೌಟ್ ಕಟ್ಟದಂತೆ ಮನವಿ ಮಾಡಿದ್ದಾರೆ.
ತತ್ಸಂಬಂಧವಾಗಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗಷ್ಟೇ ತಮ್ಮ ಪುತ್ರ ಸಂಸದರಾದ ಸಾಗರ್ ಖಂಡ್ರೆ ಅವರ ಜನ್ಮ ದಿನವನ್ನು ಬೀದರ್ ಜನತೆ ಮತ್ತು ಅಭಿಮಾನಿಗಳೆಲ್ಲಾ ಅದ್ದೂರಿಯಿಂದ ಆಚರಿಸಿದ್ದಾರೆ, ಅದಕ್ಕೆ ತಾವು ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.
ತಾವು ಜ.14ರಿಂದ 16ರವರೆಗೆ ತಾವು ಹೊರ ರಾಜ್ಯ ಪ್ರವಾಸದಲ್ಲಿರುವುದಾಗಿ ತಿಳಿಸಿರುವ ಅವರು, ಜನ್ಮ ದಿನದ ಅಂಗವಾಗಿ ಕಾರ್ಯಕರ್ತರು, ಅಭಿಮಾನಿಗಳು ಯಾರೂ ಫ್ಲೆಕ್ಸ್, ಬ್ಯಾನರ್ ಕಟ್ಟದಂತೆ, ಮಾಧ್ಯಮ ಜಾಹೀರಾತು ನೀಡದಂತೆ ಮನವಿ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles