ತೊಗರಿ ಬೆಳೆ ಹಾನಿ ತೋರಿಸಲು ಬಂದ ಯುವಕನಿಗೆ ಆರು ಹಡೆದವಳ ಮುಂದೆ ಮೂರು ಅಡಿದವಳು ಬಂದು ಹೇಳಿದಂಗಾಯಿತು ಎಂದು ಗದರಿಸಿದ ಖರ್ಗೆ
ಕಲಬುರಗಿ :: “ಆರು ಹಡೆದವಳ ಮುಂದೆ ಮೂರು ಹಡೆದವಳು ಬಂದು ಹೇಳಿದಂಗಾಯಿತು…” ಎಂದು ತೊಗರಿ ಬೆಳೆ ಹಾನಿ ತೋರಿಸಲು ಬಂದ ಯುವಕನಿಗೆ ರಾಜ್ಯಸಭೆ ಪ್ರತಿಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆ ತೆಗೆದುಕೊಂಡ ಘಟನೆ ಭಾನುವಾರ ನಡೆದಿದೆ.
ಖರ್ಗೆ ಮನೆಗೆ ತೊಗರಿ ಬೆಳೆ ಕಿತ್ತು ತಂದ ಯುವಕನಿಗೆ ‘ತೊಗರಿ ಬೆಳೆ ಹಾನಿಯಾಗಿದ್ದನ್ನು ನನಗೆ ತೋರಿಸಲು ಬಂದಿರುವೆಯಾ? ನಿನ್ನ ತೊಗರಿ ಎಷ್ಟು ಹಾಳಾಗಿದೆ ? ಎಂದು ಏರು ಧ್ವನಿಯಲ್ಲಿ ಖರ್ಗೆ ಪ್ರಶ್ನಿಸಿದರು.
“ನಾಲ್ಕು ಎಕರೆ ಹಾಳಾಗಿದೆ ಸರ್” ಎಂದು ಯುವಕ ಹೇಳಿದ್ದಾನೆ. ಖರ್ಗೆ ಪ್ರತಿಕ್ರಿಯಿಸಿ, “ನಿನ್ನದು ನಾಲ್ಕು… ನನ್ನದು 40 ಎಕರೆ ಹಾಳಾಗಿದೆ. ಬರೀ ತೊಗರಿ ಮಾತ್ರವಲ್ಲ, ಹೆಸರು, ಉದ್ದು, ಹತ್ತಿ, ಸೂರ್ಯಕಾಂತಿ ಸಹ ಹಾಳಾಗಿವೆ. ಬರೀ ಪ್ರಚಾರಕ್ಕಾಗಿ ಈ ರೀತಿ ಬರಬೇಡ,” ಎಂದು ತರಾಟೆಗೆ ತೆಗೆದುಕೊಂಡು ಪ್ರಧಾನಿ ಮೋದಿ, ಅಮಿತ್ ಶಾ ಅವರಿಂದ ಕೇಳಿ ತೆಗೆದುಕೊಳ್ಳಿ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಗೆ ಅಹಂಕಾರವೇ ಮುಳ್ಳು ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಅಹಂಕಾರ ಪ್ರಧಾನಿ ಮೋದಿಗೆ ಜಾಸ್ತಿ ಆಗಿದೆ. ಇದು ಅವರಿಗೆ ಮುಳ್ಳಾಗಲಿದೆ.”
‘ಜಿಎಸ್‌ಟಿ ಕಡಿತದಿಂದ ಬಡವರಿಗೆ ಅನುಕೂಲವಾಗಿದೆ. ಇದಕ್ಕೆ ಟೀಕೆಯೂ ಮಾಡಲ್ಲ’ ಎಂದು ಹೇಳಿದರು.
ಜಿಎಸ್‌ಟಿ ಕಡಿತದಿಂದ ಅನುಕೂಲ, ಬ್ಯಾಲೆಟ್ ನಿರ್ಧಾರ ಸರಿ
ಕರ್ನಾಟಕದಲ್ಲಿ ಇವಿಎಂ ನಿಷೇಧಿಸಿ, ಬ್ಯಾಲೆಟ್ ಪೇಪರ್ ಬಳಕೆ ಬಗ್ಗೆ ತೀರ್ಮಾನ ತೆಗೆದು ಕೊಂಡಿರುವುವುದು, ಕೇಂದ್ರದಲ್ಲಿ ಜಿಎಸ್‌ಟಿ ಕಡಿತ ಮಾಡಿರುವುದು ಸ್ವಾಗತಾರ್ಹ ಕ್ರಮ ಎಂದು ಖರ್ಗೆ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, “ಜಿಎಸ್‌ಟಿ ಕಡಿತ ಬಗ್ಗೆ ಏಳೆಂಟು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಆಗ ನಮ್ಮ ಮನವಿಗೆ ಮನ್ನಣೆ ನೀಡಲಿಲ್ಲ. ಈಗ ಯಾಕೆ ಕಡಿತ ಮಾಡಲಾಗಿದೆ ಅನ್ನೋದು ಮೋದಿಗೆ ಚೆನ್ನಾಗಿ ಗೊತ್ತು,” ಎಂದು ಹೇಳಿದರು
ಬ್ಯಾಲೆಟ್ ಪೇಪರ್: “ಕಳೆದ ಚುನಾವಣೆ ಯಲ್ಲಿ ಇವಿಎಂನಲ್ಲಿ ಮಹಾ ಮೋಸವಾಗಿದೆ. ನಾನು ಸಹ ಚುನಾವಣೆಯಲ್ಲಿ ಸೋತಾಗ ಮತಗಳ್ಳತನವಾಗಿತ್ತು. ಪಾರ್ಲಿಮೆಂಟ್‌ನಲ್ಲಿ ಖರ್ಗೆ ಬಹುತ್ ಬಾರ್ ಜೀತೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಮೋದಿ ಈ ರೀತಿ ಹೇಳಿದ ಮೇಲೆ ನನಗೆ ಬಲವಾದ ಅನುಮಾನ ಬಂದಿದೆ. ಕರ್ನಾಟಕದಲ್ಲಿ ಬ್ಯಾಲೆಟ್ ಬಳಕೆಗೆ ತೀರ್ಮಾನಿಸಿರುವುದು ಒಳ್ಳೆಯ ಕೆಲಸ,” ಎಂದು ಹೇಳಿದರು.
ಎಂದು ಹೇಳಿದರು.
“ಕೇಂದ್ರಕ್ಕೆ ನಾವು ಏನಾದರೂ ಸಲಹೆ ಸೂಚನೆ ಕೊಟ್ಟರೆ ಕಡೆಗಣಿಸುತ್ತಾರೆ. ಅದಕ್ಕೆ ಜಾಸ್ತಿ ಹೇಳಲ್ಲ.. ಹೇಳಿದರೆ ತಪ್ಪಾಗುತ್ತದೆ,” ಎಂದು ಪ್ರಧಾನಿ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಟ್ರಂಪ್ ವಿಷಯದಲ್ಲಿ ಏನಾಗಿದೆ? “ಮಾತೆತ್ತಿದರೆ ಟ್ರಂಪ್ ಟ್ರಂಪ್ ಎನ್ನುತ್ತಾರೆ.
ಟ್ರಂಪ್ ಬೆಳಗಾದರೆ ಫೋನ್ ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ, ಇಂದು ಏನಾಗಿದೆ ? ಚೀನಾವನ್ನು ಇಷ್ಟು ದಿನ ಕಡೆಗಣಿಸಿದರು. ಈಗ ಅದೇ ದೇಶಕ್ಕೆ ಮೋದಿ ಹೋಗಿ ಬಂದಿದ್ದಾರೆ. ದೇಶಕ್ಕೆ ಸಮಸ್ಯೆ ಬಂದಾಗ ನಾವೆಲ್ಲ ಒಂದಾಗಿದ್ದೇವೆ ಅನ್ನೋದು ಸಂದೇಶ ಕೊಟ್ಟಿದ್ದೀವಿ. ಪಹಲ್ಯಾಮ್ ದಾಳಿ ವೇಳೆ ಕೇಂದ್ರದ ಬೆಂಬಲ್ಲಕ್ಕಿದ್ದೇವು. ಆದರೆ, ಬಿಜೆಪಿಗರು ಪ್ರತಿಬಾರಿ ಮೋದಿ ಹೈ ಎನ್ನುತ್ತಾರೆ,” ಎಂದು ಹೇಳಿದರು.
ದ್ವಿ ಭಾಷಾ ಪದ್ಧತಿ ಆಯಾ ಸರಕಾರಕ್ಕೆ
ಅಧಿಕಾರ: ರಾಜ್ಯದಲ್ಲಿದ್ವಿಭಾಷಾ ಪದ್ಧತಿ ಜಾರಿಗೆ ಪ್ರತಿಕ್ರಿಯಿಸಿ, ”ದ್ವಿಭಾಷಾ ಪದ್ದತಿ ಜಾರಿ ಆಯಾ ಸರಕಾರ, ಆಯಾ ಇಲಾಖೆಗಳಿಗೆ ಅಧಿ ಕಾರವಿದೆ. ಆದರೆ, ನಮ್ಮ ರಾಜ್ಯದಲ್ಲಿ ಏನ್ ಮಾಡುತ್ತಾರೋ ಗೊತ್ತಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿದೆ. ನಮ್ಮ ಸರಕಾರ ಕೇಂದ್ರದಲ್ಲಿದ್ದಾಗ ಸಹ ರಾಷ್ಟ್ರೀಯ ಮಟ್ಟದಲ್ಲಿ ದ್ವಿ ಭಾಷಾ ಪದ್ಧತಿ ಅಳವಡಿಕೆ ಬಗ್ಗೆ ಚಿಂತನೆ ನಡೆಸಿದ್ದೆವು,” ಎಂದು ಹೇಳಿದರು.

