ಯುದ್ಧದ ಬದಲಿಗೆ ಜಗತ್ತು ಬುದ್ಧ ದೇವನನ್ನ ಆಯ್ದುಕೊಳ್ಳ ಬೇಕು :
ಶಹಾಪುರ : ಇಂದಿನ ಆಧುನಿಕ ಜಗತ್ತಿನ ದೇಶಗಳು ಯುದ್ಧದ ಬದಲಿಗೆ ಬುದ್ಧ ದೇವನನ್ನು ಆಯ್ಕೆ ಮಾಡಿಕೊಳ್ಳ ಬೇಕಿದೆ ಎಂದು ತಾಲೂಕ ಆಡಳಿತ ಹಾಗೂ ನಗರ ಸಭೆ ಶಹಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಂಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭಗವಾನ್ ಬುದ್ಧ ರವರ ಜಯಂತ್ಯೋತ್ಸವ – 2026 ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ. ಗ್ರೇಡ್ 2 ತಹಸೀಲ್ದಾರಾದ ಪ್ರಸನ್ನ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಆರಕ್ಷಕ ನಿರೀಕ್ಷಕರಾದ ಎಸ್. ಎಂ. ಪಾಟೀಲ್ ಅವರು ಭಗವಾನ್ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿದರು. ನಗರ ಸಭೆಯ ಕೊಟ್ರೇಶ್ ಮುಖ್ಯ ಅತಿಥಿಯಾಗಿ ವೇದಿಕೆಯಲ್ಲಿದ್ದರು. ಆರೋಗ್ಯ ಇಲಾಖೆಯ ಸಂಗಣ್ಣ ಸಾಲಿ, ಪಶು ಇಲಾಖೆಯ ಡಾ.ಅಣ್ಣಾರಾವ್, ಇನ್ನಿತರ ತಾಲೂಕ ಮಟ್ಟದ ಅಧಿಕಾರಿಗಳು , ಸಿಬ್ಬಂದಿ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಲಾಳಸೇರಿ ನಿರೂಪಣೆ ಮಾಡಿದರು. ಕಾರ್ಯಕ್ರಮಕ್ಕೆ ಮೊದಲು ಸಿಬಿ ಕಮಾನನಿಂದ ಭಗವಾನ್ ಬುದ್ಧ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಗೌರವ ಸಲ್ಲಿಸಲಾಯಿತು.
ಧನ್ಯವಾದಗಳೊಂದಿಗೆ
🙏🙏🙏
🦅ಡಾ.ಎಂ.ಎಸ್.ಸಿರವಾಳ
ಸಹಾಯಕ ಖಜಾನೆ ಅಧಿಕಾರಿ
ಶಹಾಪುರ
ಪತ್ರಿಕೆ ವರದಿ: ವಿಜಯಕುಮಾರ ದರ್ಶನಾಪುರ

