17.8 C
New York
Wednesday, September 30, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

08-02-2026 ರಂದು ಕಿತ್ತೂರಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ- ಶೋಭಾಯಾತ್ರೆ….

08-02-2026 ರಂದು ಕಿತ್ತೂರಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ- ಶೋಭಾಯಾತ್ರೆ….

ಚನ್ನಮ್ಮನ ಕಿತ್ತೂರು: ಹಿಂದೂ ಸಮ್ಮೇಳನ ಸಮಿತಿ ವತಿಯಿಂದ
ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ
ರವಿವಾರ ವಿರಾಟ್ ಹಿಂದೂ ಸಮಾಜೋತ್ಸವ ಹಾಗೂ ಭವ್ಯ ಶೋಭಾ ಯಾತ್ರೆ ಆಯೋಜಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮ ವೃತ್ತದಿಂದ ಶೋಭಾ ಯಾತ್ರೆಯು ಆರಂಭಗೊಂಡು, ಪಟ್ಟಣದ ಪ್ರಮುಖ ರಸ್ತೆಗಳಾದ ಗುರುವಾರ ಪೇಟೆ, ಅರಳಕಟ್ಟಿ, ಗುಂಬಿಗುಡಿ, ಅಕ್ಕಿಪೇಟೆ ಮೂಲಕ ಸಂಚರಿಸಿ ಸಂಜೆ 4:30ಕ್ಕೆ ಶ್ರೀ ಗುರುಸಿದ್ದೇಶ್ವರ ಪ್ರೌಢಶಾಲೆಯ ಮೈದಾನವನ್ನು ತಲುಪಲಿದೆ. ಬಳಿಕ ಮೈದಾನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ವೈಭವ ಜರುಗಲಿದೆ.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಸ್ವಾಮಿಗಳು, ದೇವರಶೀಗಿಹಳ್ಳಿ,ಮಡಿವಾಳೇಶ್ವರ ಮಠದ ಶ್ರೀ ವಿರೇಶ್ವರಸ್ವಾಮಿಗಳು, ಖೋದಾನಪೂರ ಅಂಬಾಭವಾನಿ ಮಠದ ವಿದ್ಯಾಭಾರತಿ ತಾಯಿಯವರು, ಚನ್ನಮ್ಮನ ಕಿತ್ತೂರು ಶ್ರೀ ವಿಶ್ವಕರ್ಮ ಎಕದಂಡಗಿ ಮಠದ ಶ್ರೀ ಪ್ರಮೋದ ಸ್ವಾಮಿಗಳು ಸೇರಿದಂತೆ ಹಲವು ಉಪಸ್ಥಿತರಿರಲಿದ್ದಾರೆ.

ಮಠಾಧೀಶರು ಮುಖ್ಯ ವಕ್ತಾರರಾಗಿ ಕೃಷ್ಣಾನಂದ ಕಾಮತ್ ಹಾಗೂ ದಿಕ್ಕೂಚಿ ಭಾಷಣಕಾರರಾಗಿ ಪ್ರತಿಭಾ ಉಣಕಲ್ಕರ್ ಆಗಮಿಸಲಿದ್ದಾರೆ. ಸಮಿತಿ ಗೌರವಾಧ್ಯಕ್ಷ ರಮೇಶಗೌಡ ಪಾಟೀಲ ಮತ್ತು ಅಧ್ಯಕ್ಷ ಮಡಿವಾಳಪ್ಪ ಮುರಗೋಡ ನೇತೃತ್ವದಲ್ಲಿ ಸಮಾಜೋತ್ಸವದ ಸಿದ್ಧತೆಗಳು ಪೂರ್ಣಗೊಂಡಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹಿಂದೂ ಸಮ್ಮೇಳನ ಸಮಿತಿ ವಿನಂತಿಸಿದೆ. ಸರ್ವರಿಗೂ ಸುಸ್ವಾಗತ…

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles