ಕೊಪ್ಪಳ : ಸಮೀಪದ ಜಬ್ಬಲ ಗುಡ್ಡದ ಗ್ರಾಮ ಪಂಚಾಯತ್ ಸದಸ್ಯ ಇಂದ್ರೇಶ್ ಸುಣಗಾರ ರವರು ತಮಗೆ ಬಂದಿರುವ 80 ಸಾವಿರ ರೂಪಾಯಿಗಳು ಗೌರವ ಸಂಭಾವನೆಯನ್ನು ತಮ್ಮ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕಾಗಿ ದೇಣಿಗೆ ನೀಡಿದ್ದಾರೆ.
ಗ್ರಾಮ ಪಂಚಾಯಿತಿ ನಿಂದ ಬಂದ 56 ತಿಂಗಳ ಸದಸ್ಯತ್ವದ ಗೌರವ ಸಂಭಾವನೆಯನ್ನು ಅವರು ಈ ಉದ್ದೇಶಕ್ಕೆ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಹಿಂದೆಯೂ ಕೂಡ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಸಮವಸ್ತ್ರ, ಟೇಬಲ್, ಕುರ್ಚಿ,ಕ್ರೀಡಾ ಸಮವಸ್ತ್ರ, ಖರೀದಿಗೆ ಸುಮಾರು 60 ಸಾವಿರ ರೂಪಾಯಿಗಳು ದೇಣಿಗೆ ನೀಡಿದ್ದರು.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ನನ್ನ ತಾಯಿಯ ಸ್ಮರಣಾರ್ಥ ಹಾಗೂ ನಾನು ಕಲಿತ ಶಾಲೆಗೆ ಕೈಲಾದಷ್ಟು ಸಹಾಯ ಸೇವೆ ಮಾಡಬೇಕೆಂಬುದು ನನ್ನ ಆಶಯ. ಮನುಷ್ಯನಾಗಿ ಹುಟ್ಟಿದ ಮೇಲೆ ಒಳ್ಳೆಯ ಕಾರ್ಯ ಮಾಡಬೇಕು ಎಂಬ ಉದ್ದೇಶದಿಂದ ಶಾಲೆಗೆ ದೇಣಿಗೆ ನೀಡಿದ್ದೇನೆ.

