15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

ಕಾಮನಕೇರಿ ಶ್ರೀ ದಾವಲಮಲಿಕ್ 37ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ಧೂರಿ ಶ್ವಾನಗಳ ಓಟದ ಸ್ಪರ್ಧೆ!

ಕಾಮನಕೇರಿ ಶ್ರೀ ದಾವಲಮಲಿಕ್ 37ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ಅದ್ಧೂರಿ ಶ್ವಾನಗಳ ಓಟದ ಸ್ಪರ್ಧೆ!

ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಐತಿಹಾಸಿಕ ಕಾಮನಕೇರಿ ಗ್ರಾಮದಲ್ಲಿ ಶ್ರೀ ದಾವಲಮಲಿಕ್ ಅವರ 37ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಈ ಪವಿತ್ರ ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಬರುವ ಮಾರ್ಚ್ 25, 2026 (ಬುಧವಾರ) ರಂದು ಬೆಳಿಗ್ಗೆ 9:00 ಗಂಟೆಗೆ ರೋಚಕವಾದ ‘ಶ್ವಾನಗಳ ಓಟದ ಪಂದ್ಯಾವಳಿ’ಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯ ಪ್ರಮುಖಾಂಶಗಳು:
ಕರ್ನಾಟಕ ಗ್ರೇಹಂಡ್ ಅಸೋಸಿಯೇಷನ್ ಕಮಿಟಿ ವತಿಯಿಂದ ನಡೆಯಲಿರುವ ಈ ವಿಶಿಷ್ಟ ಕ್ರೀಡಾಕೂಟವು ಶ್ವಾನ ಪ್ರಿಯರ ಗಮನ ಸೆಳೆಯುತ್ತಿದೆ. ಸ್ಪರ್ಧೆಯಲ್ಲಿ ವಿಜೇತವಾಗುವ ಶ್ವಾನಗಳಿಗೆ ಈ ಕೆಳಗಿನಂತೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ:
ಪ್ರಥಮ ಬಹುಮಾನ: ₹10,000/- (ದಾನಿಗಳು: ಡಾ|| ಪ್ರಭುಗೌಡ ಬಿ. ಲಿಂಗದಳ್ಳಿ)
ದ್ವಿತೀಯ ಬಹುಮಾನ: ₹7,000/- (ದಾನಿಗಳು: ಶ್ರೀ ಶಂಕರಗೌಡ ಸಂ. ಪಾಟೀಲ)
ತೃತೀಯ ಬಹುಮಾನ: ₹5,000/- (ದಾನಿಗಳು: ಶ್ರೀ ವಿಜುಗೌಡ ಪಾಟೀಲ)
ನಾಲ್ಕನೇ ಬಹುಮಾನ: ₹3,001/-
ಐದನೇ ಬಹುಮಾನ: ₹2,001/-
6 ರಿಂದ 10ನೇ ಸ್ಥಾನ: ತಲಾ ₹1,001/- ರಂತೆ ಸಮಾಧಾನಕರ ಬಹುಮಾನ ನೀಡಲಾಗುವುದು.
ಭಾಗವಹಿಸುವಿಕೆ:
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಶ್ವಾನ ಮಾಲೀಕರು ₹501/- ಪ್ರವೇಶ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ. ವಿಜೇತರಿಗೆ ನಗದು ಬಹುಮಾನದ ಜೊತೆಗೆ ಆಕರ್ಷಕ ಟ್ರೋಫಿಗಳನ್ನು ಸಹ ವಿತರಿಸಲಾಗುವುದು.
ಕಾಮನಕೇರಿ ಗ್ರಾಮದ ಸಕಲ ಸದ್ಭಕ್ತರು, ಶ್ವಾನ ಪ್ರೇಮಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕ್ರೀಡಾ ಸಂಭ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಮಸ್ತ ದೈವ ಮಂಡಳಿ ಕಾಮನಕೇರಿ ವತಿಯಿಂದ ಪ್ರಕಟಣೆಯಲ್ಲಿ ಕೋರಲಾಗಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles