16.4 C
New York
Tuesday, September 29, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

INTERESTING FACTS: ವಿಸ್ಕಿ ಜೊತೆ ನೀರು ಮಿಕ್ಸ್ ಮಾಡೋದು ಯಾಕೆ ಗೊತ್ತಾ?

ವೀಕೆಂಡ್ ಬಂತೆಂದರೆ ಸಾಕು, ಪಾರ್ಟಿ ಪ್ರಿಯರ (Drinks) ಪ್ಲ್ಯಾನ್‌ಗಳು ‘ಫುಲ್ ಬಾಟಲ್’ ವೇಗದಲ್ಲಿ (Interesting facts) ಓಡುತ್ತವೆ. ಗ್ಲಾಸಿನೊಳಗೆ ಐಸ್ ಕ್ಯೂಬ್‌ಗಳು ಜಾರಿ ಬೀಳುವ ಸದ್ದು, ಅದರ ಬೆನ್ನಲ್ಲೇ ಸೋಡಾ (Whiskey) ಅಥವಾ ನೀರು ಬೆರೆಸಿ ಕುಡಿಯುವ ಭಾರತೀಯರ ‘ಪಕ್ಕಾ ದೇಸಿ’ ಸ್ಟೈಲ್ ನಮಗೆಲ್ಲಾ ಗೊತ್ತು.

ಆದರೆ ನೀವು ಗಮನಿಸಿರಬಹುದು, ಪಾಶ್ಚಿಮಾತ್ಯ ದೇಶಗಳಲ್ಲಿ ವಿಸ್ಕಿಯನ್ನು ನೇರವಾಗಿ ಅಂದರೆ ‘ನೀಟ್’ ಆಗಿ ಕುಡಿಯುತ್ತಾರೆ. ಆದರೆ ಭಾರತೀಯರು ಮಾತ್ರ ಅದಕ್ಕೆ ನೀರು ಅಥವಾ ಕೋಕ್ ಬೆರೆಸದೆ ಕುಡಿಯುವುದಿಲ್ಲ.

ಇದರ ಹಿಂದೆ ಕೇವಲ ಅಭ್ಯಾಸವಲ್ಲ, ಮಜವಾದ ವಿಜ್ಞಾನ ಮತ್ತು ಕಿಕ್ ಕೊಡುವ ಕಾರಣಗಳಿವೆ.

ವಿದೇಶಿ ವಿಸ್ಕಿಗಳು ಹೆಚ್ಚಾಗಿ ‘ಮಾಲ್ಟ್’ನಿಂದ ತಯಾರಾಗುತ್ತವೆ. ಆದರೆ ಭಾರತದ ಮಧ್ಯಮ ಶ್ರೇಣಿಯ ಬ್ರ್ಯಾಂಡ್‌ಗಳು ವಿಸ್ಕಿ ತಯಾರಿಸಲು ‘ಮೊಲಾಸಸ್’ ಅಂದರೆ ಕಬ್ಬಿನ ರಸವನ್ನು ಬಳಸುತ್ತವೆ. ಇದು ಮದ್ಯಕ್ಕೆ ಒಂದು ತೀವ್ರವಾದ ಕಹಿ ಮತ್ತು ಗಂಟಲಿನಲ್ಲಿ ಸುಡುವ ಸಂವೇದನೆಯನ್ನು ನೀಡುತ್ತದೆ. ಈ ಕಹಿಯನ್ನು ತಡೆದುಕೊಳ್ಳುವುದು ಸಾಧಾರಣ ಮಾತಲ್ಲ, ಅದಕ್ಕಾಗಿಯೇ ಭಾರತೀಯರು ಈ ‘ಖಾರ’ವನ್ನು ಕಡಿಮೆ ಮಾಡಿ ರುಚಿಯನ್ನು ಹದಗೊಳಿಸಲು ನೀರು ಅಥವಾ ಸೋಡಾ ಮೊರೆ ಹೋಗುತ್ತಾರೆ.

ಭಾರತೀಯ ಪಾರ್ಟಿ ಅಂದ ಮೇಲೆ ಅಲ್ಲಿ ಮಸಾಲೆಯುಕ್ತ ಚಿಕನ್ ಕಬಾಬ್, ಖಾರವಾದ ತಿಂಡಿಗಳು ಇರಲೇಬೇಕು. ನಮ್ಮ ಆಹಾರದ ಮಸಾಲೆ ಮತ್ತು ವಿಸ್ಕಿಯ ಕಹಿ ಸೇರಿದರೆ ಜೀರ್ಣಕ್ರಿಯೆಗೆ ತುಸು ಭಾರವಾಗಬಹುದು. ಅಂತಹ ಸಂದರ್ಭದಲ್ಲಿ ನೀರು ಬೆರೆಸಿದ ಮದ್ಯವು ಒಂದು ಸೌಮ್ಯ ಪಾನೀಯವಾಗಿ ಕೆಲಸ ಮಾಡುತ್ತದೆ. ಇದು ಮಸಾಲೆಗಳ ತೀವ್ರತೆಯನ್ನು ತಗ್ಗಿಸಿ, ಅಡುಗೆಯ ರುಚಿಯನ್ನು ಸವಿಯಲು ನೆರವಾಗುತ್ತದೆ.

ವಿದೇಶಗಳಲ್ಲಿ ಚಳಿಯ ವಾತಾವರಣವಿರುವುದರಿಂದ ಅವರು ‘ನೀಟ್’ ಕುಡಿದು ಮೈ ಬೆಚ್ಚಗೆ ಮಾಡಿಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ಬೇಸಿಗೆಯ ಧಗೆಯ ನಡುವೆ ವಿಸ್ಕಿಯ ಉಷ್ಣತೆಯೂ ಸೇರಿದರೆ ಕಿರಿಕಿರಿ ಗ್ಯಾರಂಟಿ. ಹೀಗಾಗಿ ಐಸ್ ಕ್ಯೂಬ್ ಅಥವಾ ತಣ್ಣೀರು ಬೆರೆಸಿ ಮದ್ಯದ ತಾಪಮಾನವನ್ನು ತಗ್ಗಿಸಿ ಆನಂದಿಸುವುದು ನಮ್ಮವರಿಗೆ ಇಷ್ಟ.

ಭಾರತೀಯ ಪಾರ್ಟಿಗಳು ಎಂದರೆ ಅದು ಕೇವಲ ಕುಡಿಯುವುದಲ್ಲ, ಗಂಟೆಗಟ್ಟಲೆ ನಡೆಯುವ ಹರಟೆ ಕಚೇರಿ. ಒಮ್ಮೆ ಬಾಟಲಿ ತೆರೆದರೆ ಅದು ಎಷ್ಟು ಹೊತ್ತು ಬರುತ್ತೆ ಅನ್ನೋದೇ ಲೆಕ್ಕಾಚಾರ. ಮದ್ಯಕ್ಕೆ ನೀರು ಬೆರೆಸುವುದರಿಂದ ಕಿಕ್ ನಿಧಾನವಾಗಿ ಏರುತ್ತದೆ ಮತ್ತು ಪಾನೀಯವು ದೀರ್ಘಕಾಲದವರೆಗೆ ಗ್ಲಾಸಿನಲ್ಲಿ ಉಳಿಯುತ್ತದೆ. ಇದರಿಂದ ಹೆಚ್ಚು ಸಮಯ ಮಾತನಾಡುತ್ತಾ ಪಾರ್ಟಿಯನ್ನು ಎಂಜಾಯ್ ಮಾಡಬಹುದು.

ಒಟ್ಟಿನಲ್ಲಿ, ವಿದೇಶಿಗರಿಗೆ ವಿಸ್ಕಿ ಎಂಬುದು ಒಂದು ‘ಐಷಾರಾಮಿ ಸುವಾಸನೆ’ಯಾದರೆ, ಭಾರತೀಯರಿಗೆ ಅದೊಂದು ‘ಸಮಾಧಾನದ ಪಾನೀಯವಾಗಿದೆ.

ವರದಿ: ವಿಜಯಕುಮಾರ ದರ್ಶನಾಪೂರ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles