14.6 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

RCB Smriti Mandhana: ಆರ್‌ಸಿಬಿ ನಾಯಕಿ ಸ್ಮೃತಿ ಮಂದಾನಗೆ ಮದುವೆ ದಿನವೇ ದೊಡ್ಡ ಆಘಾತ

ಭಾರತೀಯ ಮಹಿಳಾ ಕ್ರಿಕೆಟ್ ತಾರೆ, ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂದಾನ ಅವರಿಗೆ ತಮ್ಮ ಮದುವೆ ದಿನವೇ ಬಿಗ್‌ಶಾಕ್‌ ಎದುರಾಗಿದೆ. ಸ್ಮೃತಿ ಮಂಧಾನ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರ ವಿವಾಹ ದಿಢೀರ್‌ ಮುಂದೂಡಲಾಗಿದೆ. ಮಂಧಾನ ಮತ್ತು ಮುಚ್ಚಲ್ ಭಾನುವಾರ (ಇಂದು) ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಿದ್ದ ಖಾಸಗಿ ಸಮಾರಂಭದಲ್ಲಿ ವಿವಾಹವಾಗಲು ಸಜ್ಜಾಗಿದ್ದರು.

ಆದರೆ ಇದ್ದಕ್ಕಿದ್ದಂತೆ ಅವರ ಮದುವೆ ನಿಂತು ಹೋಗಿದೆ.

ಸ್ಮೃತಿ ಮಂದಾನ ಅವರ ಮದುವೆಯ ನಿಮಿತ್ತ ಕಳೆದ ಎರಡು ದಿನಗಳಿಂದ ಮೆಹೆಂದಿ, ಹಳದಿ ಮತ್ತು ಸಂಗೀತದಂತಹ ಸಾಂಪ್ರದಾಯಿಕ ಆಚರಣೆಗಳನ್ನು ಒಳಗೊಂಡ ಆಚರಣೆಗಳು ನಡೆದಿದ್ದವು. ವಿಶೇಷ ಕ್ರಿಕೆಟ್ ಪಂದ್ಯವನ್ನು ಸಹ ಆಯೋಜಿಸಿದ್ದರು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ಸ್ಮೃತಿ ಮಂದಾನ ಅವರ ಬಾಳಲ್ಲಿ ಬಿರುಗಾಳಿ ಎದ್ದಿದೆ.

ಸ್ಮೃತಿ ಅವರ ಮದುವೆ ಸಮಾರಂಭವು ನವೆಂಬರ್ 23ರ ಭಾನುವಾರ ಮಹಾರಾಷ್ಟ್ರದ ಅವರ ತವರು ಮನೆಯಲ್ಲಿ ನಡೆಯಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ದಿಢೀರ್‌ ಅನಾರೋಗ್ಯದ ಕಾರಣ ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಅವರ ತಂದೆಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಂದೆ ಅನಾರೋಗ್ಯಕ್ಕೆ ಒಳಗಾದ ಕಾರಣ ಅವರ ವಿವಾಹವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಮಾಧ್ಯಮಗಳು ವರದಿಯಾಗಿದೆ.

ಮ್ಯಾನೇಜರ್‌ ಹೇಳಿದ್ದೇನು?

ಕೌಟುಂಬಿಕ ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರು ಈ ಮದುವೆ ಸಮಾರಂಭವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದು ಅವರ ಮ್ಯಾನೇಜರ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯ ನಡುವೆ ಮದುವೆಯನ್ನು ಮುಂದುವರಿಸಲು ಅವರು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದು ಬೆಳಿಗ್ಗೆ ಅವರು ಸ್ಮೃತಿ ಮಂದಾನ ಅವರ ತಂದೆ ಉಪಾಹಾರ ಸೇವಿಸುತ್ತಿದ್ದಾಗ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರು ಚೇತರಿಸಿಕೊಳ್ಳುತ್ತಾರೆಯೇ ಎಂದು ನೋಡಲು ನಾವು ಸ್ವಲ್ಪ ಸಮಯ ಕಾಯುತ್ತಿದ್ದೆವು. ಆದರೆ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ನಾವು ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಬಯಸಲಿಲ್ಲ. ತಕ್ಷಣ ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸ್ಮೃತಿ ತನ್ನ ತಂದೆ ಚೇತರಿಸಿಕೊಳ್ಳುವವರೆಗೆ ಮದುವೆ ಮುಂದೂಡಲು ನಿರ್ಧರಿಸಿದ್ದಾರೆ ಎಂದು ಮ್ಯಾನೇಜರ್‌ ತುಹಿನ್ ಮಿಶ್ರಾ ಹೇಳಿದ್ದಾರೆ.

ಸಾಂಗ್ಲಿಯ ಸ್ಯಾಮ್ಡೋಲ್‌ನಲ್ಲಿರುವ ಮಂದಾನ ಫಾರ್ಮ್ ಹೌಸ್‌ನಲ್ಲಿ ವಿವಾಹದ ಸಿದ್ಧತೆಗಳು ನಡೆಯುತ್ತಿರುವಾಗಲೇ ಸ್ಮೃತಿ ಮಂದಾನ ಅವರ ತಂದೆ ಶ್ರೀನಿವಾಸ್ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಅವರನ್ನು ತಕ್ಷಣವೇ ಸಾಂಗ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರನ್ನು ತುರ್ತು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಮೃತಿ ಮಂಧಾನ ಮತ್ತು ಕುಟುಂಬದವರು ಆಸ್ಪತ್ರೆಗೆ ಧಾವಿಸಿದ್ದಾರೆ. ಮದುವೆ ದಿನವೇ ಈ ಘಟನೆ ನಡೆದಿರುವುದು ಸ್ಮೃತಿ ಅವರ ಅಭಿಮಾನಿಗಳಿಗೂ ನೋವು ತರಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles