15.3 C
New York
Sunday, September 27, 2026

Buy now

ಸೇರಿಕೊಳ್ಳಿ
ನಮ್ಮೊಂದಿಗೆ ಸೇರಿ ಮತ್ತು ವರದಿಗಾರರಾಗಲು ಈಗಲೇ ನೋಂದಾಯಿಸಿ ಈಗಲೇ ಅರ್ಜಿ ಸಲ್ಲಿಸಿ

Wealth Building Tips: ಕಡಿಮೆ ಸಂಬಳವಿದ್ರೂ ಚಿಂತೆ ಮಾಡ್ಬೇಡಿ, ಈ ಟ್ರಿಕ್ಸ್‌ ಯೂಸ್‌ ಮಾಡಿ! ಪಕ್ಕಾ ಶ್ರೀಮಂತರಾಗ್ತೀರಾ

ಕೆವಲ ಆದಾಯ (Income) ಗಳಿಸೋದಲ್ಲ, ಅದನ್ನು ಹೂಡಿಕೆ ಮಾಡುವುದನ್ನೂ ತಿಳಿದಿರಬೇಕು. ಹಣ ಮಾಡುವುದೆಂದರೆ ದೊಡ್ಡ ಸಂಬಳ ಗಳಿಸುವುದಲ್ಲ, ಬದಲಾಗಿ ಈಗಾಗಲೇ ನಿಮ್ಮ ಬಳಿ ಇರುವ ಸಂಪತ್ತನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಮುಖ್ಯ. ಹೆಚ್ಚಿನವರು ಆರಂಭದ ಕೆರಿಯರ್‌ನಲ್ಲಿ (Career) ಸ್ಯಾಲರಿ ಕಡಿಮೆ ಇದೆ ಎಂದು ಯಾವುದೇ ಪ್ಲಾನ್‌ ಮಾಡುವುದಿಲ್ಲ.

ಆದರೆ ಶ್ರೀಮಂತರಾಗುವ ಲಕ್ಷಣ ಇದಲ್ಲ. ತಮ್ಮಲ್ಲಿರುವ ಸಂಪತನ್ನು, ಸಂಬಳ ಹೆಚ್ಚಳದಿಂದಲ್ಲ, ಬದಲಾಗಿ ಉತ್ತಮ ಅಭ್ಯಾಸಗಳಿಂದ ನಿರ್ವಹಿಸಬಹುದು. ಆದ್ದರಿಂದ ನೀವು ಕಮ್ಮಿ ಸಂಬಳದಿಂದಲೇ (Salary) ಸರಿಯಾದ ಪ್ಲಾನ್‌ ಮಾಡಿಕೊಂಡರೆ, ದೀರ್ಘಾವಧಿಯಲ್ಲಿ ಹೆಚ್ಚು ಆದಾಯ ಗಳಿಸಬಹುದು. ಹಾಗಿದ್ರೆ ಇದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಸರಿಯಾದ ಪ್ಲಾನ್‌ ಮಾಡಿಕೊಳ್ಳಿ: ಸಂಪತ್ತು ನಿರ್ಮಾಣಕ್ಕೆ ನಿರ್ದಿಷ್ಟ ದಿಕ್ಕು ಬೇಕು. ಹೂಡಿಕೆ ಅಥವಾ ಉಳಿತಾಯ ಮಾಡುವ ಮೊದಲು, ನೀವು ಹೂಡಿಕೆ ಮಾಡುವ ಗುರಿ (1 ವರ್ಷ, 5 ವರ್ಷ, 10 ವರ್ಷ), ಪ್ರಸ್ತುತ ಆರ್ಥಿಕ ಸ್ಥಿತಿ (ಆದಾಯ, ಖರ್ಚು, ಸಾಲಗಳು, ಉಳಿತಾಯ) ಬಗ್ಗೆ ಸರಿಯಾಗಿ ಪ್ಲಾನ್‌ ಮಾಡಿಕೊಳ್ಳಬೇಕು. ಇದನ್ನು ಮಾಡಿದ್ರೆ ನಿಮಗೂ ಒಂದೊಳ್ಳೆ ಲೈಫ್‌ ಲೀಡ್‌ ಮಾಡಬಹುದು.

ಉಳಿತಾಯವನ್ನು ಅನಿವಾರ್ಯ ಅಭ್ಯಾಸವಾಗಿಸಿಕೊಳ್ಳಿ: ಉಳಿತಾಯ ಮಾಡಲು ದೊಡ್ಡ ಸಂಬಳದ ಅಗತ್ಯವಿಲ್ಲ, ಬದಲಾಗಿ ಸರಿಯಾದ ಪ್ಲಾನ್‌ ಮುಖ್ಯ. 50-30-20 ನಿಯಮವನ್ನು (ಸಾಧಾರಣ ಆದಾಯಕ್ಕೆ ಹೊಂದಿಸಲಾಗಿದೆ) ಬಳಸಿ: 50% ಅಗತ್ಯಗಳಿಗಾಗಿ (ಬಾಡಿಗೆ, ಆಹಾರ, ಪ್ರಯಾಣ, ಯುಟಿಲಿಟಿ ಬಿಲ್‌ಗಳು), 30% ಜೀವನಶೈಲಿ ಮತ್ತು ವೈಯಕ್ತಿಕ ವೆಚ್ಚಗಳಿಗೆ, 20% ಉಳಿತಾಯ ಮತ್ತು ಹೂಡಿಕೆಗಾಗಿ ಬಳಸಬೇಕು. 20% ಕಷ್ಟವೆನಿಸಿದರೆ, 10% ನಿಂದಲೂ ಶುರು ಮಾಡಬಹುದು. ಆದರೆ ಸ್ಯಾಲರಿ ಹೆಚ್ಚಾದಂತೆ, ಪ್ರತಿ ವರ್ಷ ಹೂಡಿಕೆಯನ್ನೂ ಹೆಚ್ಚಿಸುತ್ತಾ ಹೋಗಿ.

ಅಗತ್ಯಕ್ಕಾಗಿ ಹಣ ಹೂಡಿಕೆ ಮಾಡಿ: ಸಂಪತ್ತು ನಿರ್ಮಾಣದ ಬಗ್ಗೆ ಯೋಚಿಸುವ ಮೊದಲು, ಜೀವನದ ಬಗ್ಗೆ ಯೋಚಿಸಿ. ತುರ್ತು ನಿಧಿಯು ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಎದುರಾದಾಗ ನಿಮ್ಮ ಆದಾಯಕ್ಕೆ ಸಮಸ್ಯೆ ಆಗದಂತೆ ಅಥವಾ ಸಾಲ ತೆಗೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. 3-6 ತಿಂಗಳ ವೆಚ್ಚಗಳನ್ನು ಈ ನಿಧಿಯಲ್ಲಿ ಇಡುವುದು ಸೂಕ್ತ. ಇದನ್ನು ಹೆಚ್ಚಿನ ಆದಾಯ ನೀಡುವ ಉಳಿತಾಯ ಖಾತೆ ಅಥವಾ ಲಿಕ್ವಿಡ್ ಮ್ಯೂಚುಯಲ್ ಫಂಡ್‌ನಲ್ಲಿ ಇಡಬಹುದು. ಇದು ನಿಮ್ಮ ಆರ್ಥಿಕ ಸುರಕ್ಷತೆಗೆ ಒಳ್ಳೆಯದು.

ಹೆಚ್ಚಿನ ಬಡ್ಡಿ ದರದ ಸಾಲವನ್ನು ಬೇಗನೆ ತೀರಿಸಿ: ಸಂಪತ್ತು ಸೃಷ್ಟಿಗೆ ಅತಿದೊಡ್ಡ ಅಡೆತಡೆಗಳಲ್ಲಿ ಸಾಲವೂ ಒಂದು. ವಿಶೇಷವಾಗಿ 24%-36% ಬಡ್ಡಿ ವಿಧಿಸುವ ಕ್ರೆಡಿಟ್ ಕಾರ್ಡ್ ಸಾಲಗಳು ಅಥವಾ ವೈಯಕ್ತಿಕ ಸಾಲಗಳು. ಇವುಗಳನ್ನು ಪಡೆದಿದ್ದರೆ ಆದಷ್ಟು ಬೇಗ ಕ್ಲಿಯರ್‌ ಮಾಡಿ.

ನಿಮ್ಮ ಆದಾಯಕ್ಕಿಂತ ಕಡಿಮೆ ಜೀವಿಸಿ: ಬುದ್ಧಿವಂತಿಕೆಯಿಂದ ಬಂದ ಸಂಬಳ ಬಳಸಿಕೊಳ್ಳಬೇಕು. ಶ್ರೀಮಂತರು ಶ್ರೀಮಂತರಾಗಿ ಯಾವತ್ತೂ ಕಾಣುವುದಿಲ್ಲ. ಬದಲಾಗಿ ಮತ್ತಷು ಹಣ ಮಾಡುವುದರ ಬಗ್ಗೆ ಗಮನಹರಿಸುತ್ತಾರೆ. ಆದರೆ ಇತ್ತೀಚಿನ ಯುವಕರು ಲೈಫ್‌ ಟ್ರೆಂಡ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಉತ್ತಮ ಫೋನ್‌ಗಳನ್ನು ಖರೀದಿಸುವುದು, ಹೊರಗೆ ತಿನ್ನುವುದು ಅಥವಾ ಅನಗತ್ಯ EMI ಖರೀದಿಗಳನ್ನು ಮಾಡುವುದು. ಇದನ್ನು ಆದಷ್ಟು ಕಡಿಮೆ ಮಾಡಿ. ಆದ್ದರಿಂದ ಸಾಧಾರಣ ರೂಮ್‌ ಆಯ್ಕೆ ಮಾಡಿ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ, ಮನೆಯಲ್ಲೇ ಹೆಚ್ಚು ಅಡುಗೆ ಮಾಡಿ, ಸಾಧ್ಯವಾದಲ್ಲೆಲ್ಲಾ ಸಾರ್ವಜನಿಕ ಸಾರಿಗೆ ಬಳಸಿ, “EMI ಜೀವನಶೈಲಿ” ಬಲೆಗಳಿಂದ ದೂರವಿದ್ದಷ್ಟು ಒಳ್ಳೆಯದು.

(ಈ ವಿಶ್ಲೇಷಣೆ ಮತ್ತು ಮಾಹಿತಿ ಕೇವಲ ವೈಯಕ್ತಿಕ ವಿಶ್ಲೇಷಕರು ಅಥವಾ ಸಂಸ್ಥೆಗಳ ಅಭಿಪ್ರಾಯವಾಗಿದೆ ಮತ್ತು Goodreturns.in ಅಥವಾ Greynium Information Technologies Private Limited (ಒಟ್ಟಾರೆ “ನಾವು” ಎಂದು ಕರೆಯಲಾಗುತ್ತದೆ) ಅವರ ಅಭಿಪ್ರಾಯವನ್ನು ಹೇಳಲಾಗುವುದಿಲ್ಲ. ನಾವು ಯಾವುದೇ ಮಾಹಿತಿಯ ನಿಖರತೆ, ಪೂರ್ಣತೆ ಅಥವಾ ವಿಶ್ವಾಸಾರ್ಹತೆ ಬಗ್ಗೆ ಗ್ಯಾರಂಟಿ ನೀಡುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಾವು ಯಾವುದೇ ಹೂಡಿಕೆ ಸಲಹೆ ನೀಡುವುದಿಲ್ಲ ಅಥವಾ ಷೇರುಗಳ ಖರೀದಿ ಅಥವಾ ಮಾರಾಟ ಮಾಡುವ ಬಗ್ಗೆ ಒತ್ತಾಯಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಕೇವಲ ಶಿಕ್ಷಣ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು, ಒಬ್ಬ ಅರ್ಹ ಹಣಕಾಸು ಸಲಹೆಗಾರರಿಂದ ಸಲಹೆ ಪಡೆದರೆ ಉತ್ತಮ.

ವರದಿ: ವಿಜಯಕುಮಾರ ದರ್ಶನಾಪೂರ

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
22,900SubscribersSubscribe
- Advertisement -spot_img

Latest Articles